
ಹಾಸನ: ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಿಶ್ವವಿದ್ಯಾಲಯ ಇಂದೋರ್ ವತಿಯಿಂದ ಪೂರ್ಣಿಮಾ ಬಿ ಆರ್ ಅವರಿಗೆ ಡಾಕ್ಟರೇಟ್ (Ph.D.) ಪದವಿ ಪ್ರದಾನ ಮಾಡಲಾಗಿದೆ.
“ಸಾಮಾನ್ಯ, ಅತಿ ಪ್ರಕಾಶಮಾನ, ಕಡಿಮೆ ಪ್ರಕಾಶಮಾನ ಹಾಗೂ ವಿಶಿಷ್ಟ ವಿಧದ Sಓeಐಚಿಗಳ ಅಂತರ್ನಿಹಿತ ವ್ಯತ್ಯಾಸಗಳ ಅಧ್ಯಯನ” ಎಂಬ ಶೀರ್ಷಿಕೆಯಡಿ ಸಲ್ಲಿಸಿದ ಸಂಶೋಧನಾ ಪ್ರಬಂಧಕ್ಕೆ ಈ ಪದವಿ ಲಭಿಸಿದೆ.
ಪೂರ್ಣಿಮಾ ಬಿ.ಆರ್ ಅವರು ಭೌತಶಾಸ್ತ್ರ ವಿಭಾಗದಲ್ಲಿ ಕುಲಪತಿ ಡಾ. ನೀತು ರಾಠೋರೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದರು. ಸಂಶೋಧನಾ ಪ್ರಬಂಧವನ್ನು ವಿಶ್ವವಿದ್ಯಾಲಯ ಅಂಗೀಕರಿಸಿದ್ದು, ಯುಜಿಸಿ ನಿಯಮಾವಳಿ 2009 ಅನ್ವಯ ತತ್ವಶಾಸ್ತ್ರದ ಡಾಕ್ಟರೇಟ್ (Ph.D.) ಪದವಿಗೆ ಅರ್ಹರೆಂದು ಘೋಷಿಸಲಾಗಿದೆ.
ಪೂರ್ಣಿಮಾ ಬಿ ಆರ್ ಅವರ ಈ ಸಾಧನೆಗೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಕಾಡೆಮಿಕ್ ವಲಯದಿಂದ ಅಭಿನಂದನೆಗಳು ವ್ಯಕ್ತವಾಗಿವೆ.


Leave a Reply