Advertisement

ಹಣಕಾಸು ವಿಚಾರಕ್ಕೆ ಯುವಕನ ಹತ್ಯೆ – ಒಂದು
ಮೂಳೆಯೂ ಸಿಗದಂತೆ ಸುಟ್ಟು ಹಾಕಿದ ದುಷ್ಕರ್ಮಿಗಳು

ದಿನಾಂಕ:10/03/2026 ರಂದು ಮಧ್ಯಾಹ್ನ ಸುಮಾರು 12:00 ಗಂಟೆ ಸಮಯದಲ್ಲಿ ಶ್ರೀ.ವರುಣ ಬಿನ್‌ ಲೇ. ಮಹೇಶ, ವಯಸ್ಸು 22 ವರ್ಷ, ವಿಳಾಸ ಕಾಡಯ್ಯನಕೊಪ್ಪಲು ಗ್ರಾಮ, ಗಂಡಸಿ ಹೋಬಳಿ, ಅರಸೀಕೆರೆ ತಾಲ್ಲೂಕು ರವರು ಮೋಟಾರು ಬೈಕ್‌ ರಿಪೇರಿ ಮಾಡಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೋದವರು ವಾಪಸ್ಸು ಬಾರದೇ ಇದ್ದುದ್ದರಿಂದ ಆತನ ತಾಯಿ ಶ್ರೀಮತಿ.ಕಲಾವತಿ ಕೋಂ ಲೇ.ಮಹೇಶ ಎಂಬುವವರು ನೀಡಿದ ದೂರಿನ ಮೇರೆಗೆ ಗಂಡಸಿ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪತ್ತೆಕಾರ್ಯದಲ್ಲಿದ್ದಾಗ ಶಶಾಂಕ, ಸತೀಶ, ಕಿರಣ್‌, ಅಭಿ, ಜೀವನ್‌, ಚೇತನ್‌, ಗಜ ಃ ಪ್ರಜ್ವಲ್‌, ಪೃಥ್ವೀಕ್‌ ರವರುಗಳೆಲ್ಲಾ ಸೇರಿಕೊಂಡು ವರುಣ ಮತ್ತು ಶಶಾಂಕನಿಗೆ ಇದ್ದ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಗಂಡಸಿಯ ಕೆರೆಯ ಹತ್ತಿರದಿಂದ ವರುಣನನ್ನು ಕರೆದುಕೊಂಡು ಹೋಗಿ ದುದ್ದ ಪೊಲೀಸ್‌‍ ಠಾಣಾ ವ್ಯಾಪ್ತಿಯ ಹಂಗರಹಳ್ಳಿ ಗ್ರಾಮದ ಕಿರಣ್‌ ರವರ ತೋಟದ ಮನೆಯಲ್ಲಿ ಇಟ್ಟುಕೊಂಡು ಕೊಲೆ ಮಾಡುವ ಉದ್ದೇಶದಿಂದ ಮಾರಕಾಸ್ತ್ರಗಳಿಂದ ಹೊಡೆದು, ಹಾಸನದ ಶಶಾಂಕನ ಮನೆಗೆ ಕರೆದುಕೊಂಡು ಹೋಗಿ ಲಾಂಗ್‌, ಚಾಕು, ವೈಯರ್‌ ಹಾಗೂ ಪಂಚ್‌ ನಿಂದ ಹೊಡೆದು ಕೊಲೆ ಮಾಡಿರುವುದು ತನಿಖಾ ಸಮಯದಲ್ಲಿ ಕಂಡುಬಂದಿದ್ದರಿಂದ ಕೊಲೆ ಮಾಡಿರುವ ಶಶಾಂಕ, ಸತೀಶ, ಕಿರಣ್‌, ಅಭಿ, ಜೀವನ್‌, ಚೇತನ್‌, ಗಜ ಃ ಪ್ರಜ್ವಲ್‌ ಮತ್ತು ಪೃಥ್ವೀಕ್‌ ರವರುಗಳ ವಿರುದ್ದ ಮುಂದಿನ ಕಾನೂನು ಕ್ರಮಕೈಗೊಳ್ಳುವಂತೆ ದಿನಾಂಕ: 19/03/2026 ರಂದು ಶ್ರೀಮತಿ.ಆರತಿ, ಪಿ.ಎಸ್‌‍. ಐ ಗಂಡಸಿ ಪೊಲೀಸ್‌‍ ಠಾಣೆ ರವರು ನೀಡಿದ ದೂರಿನ ಮೇರೆಗೆ ದುದ್ದ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆಕೈಗೊಂಡಿರುತ್ತೆ.

Leave a Reply

Your email address will not be published. Required fields are marked *