
ದಿನಾಂಕ 17.01.2026 ನೇ ಶನಿವಾರ ಬೆಳಿಗ್ಗೆ 9 ಗಂಟೆ ಗೆ ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ವತಿಯಿಂದ ಹಾಸನದ ಕಿರಣ್ ಪ್ರೌಢಶಾಲೆಯಲ್ಲಿ **National observance in india* ಮತ್ತು ರೋಟರಿ ರಸ್ತೆ ಸುರಕ್ಷತಾ ಸಪ್ತಾಹ ಪ್ರಯುಕ್ತ ವಿದ್ಯಾರ್ಥಿಗಳಲ್ಲಿ ಸಂಚಾರಿ ನಿಯಮ ಮತ್ತು ಚಿನ್ಹೆ ಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕ್ವಿಜ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ದಲ್ಲಿ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗೆಗಿನ ಹಲವಾರು ಪ್ರಶ್ನೆ- ಉತ್ತರ ಗಳಿಂದ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು.
ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ನ ಅಧ್ಯಕ್ಷರು ರೋ!! ವಜ್ರ ಕುಮಾರ್ H D ಪ್ರಸ್ತಾವಿಕ ವಾಗಿ ಮಾತನಾಡಿ ರೋಟರಿ ರಸ್ತೆ ಸುರಕ್ಷತಾ ಸಪ್ತಾಹದ ದ್ಯೇಯೋದ್ದೇಶ ಮತ್ತು ಮಹತ್ವವನ್ನು ವಿವರಿಸಿ, ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಪ್ರಯೋಜನಕಾರಿ ಈ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ರವಾನೆ ಯಾಗಿ ಉತ್ತಮ ಜಾಗೃತಿ ಉಂಟಾಗುತ್ತದೆಂದು ತಿಳಿಸಿದರು.
ಸನ್ ರೈಸ್ ಕ್ಲಬ್ ಕಾರ್ಯದರ್ಶಿಗಳು ಮತ್ತು ವಕೀಲರು ರೋ!! ಕೆ ಎಸ್ ಯೋಗೇಶ್ ರವರು ಸಂಚಾರ ನಿಯಮಗಳ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಿರಣ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಆನಂದ್ ರವರು ಮಾತನಾಡಿ ಸನ್ ರೈಸ್ ರೋಟರಿ ಸಂಸ್ಥೆಯ ಕಾಳಜಿಯ ಬಗ್ಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮ ದಲ್ಲಿ ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ನ ನಿರ್ದೇಶಕರು ಗಳಾದ ರೋ!! ರಾಜಣ್ಣ, ರೋ!! ಸಿದ್ದನಂಜಪ್ಪ, ಜಂಟಿ ಕಾರ್ಯದರ್ಶಿ ರೋ!! ಶಶಿಂದ್ರನಾಥಾನ್, ರೋ!! ರಾಜೇಶ್ ಮತ್ತು ಹಲವಾರು ಸದಸ್ಯರು, ಕಿರಣ್ ಪ್ರೌಢಶಾಲೆಯ ಎಲ್ಲಾ ಶಿಕ್ಷಕರು, ಮತ್ತು ಸಿಬ್ಬಂದಿ ಗಳು ಉಪಸ್ಥಿತರಿದ್ದರು.
ಶಿಕ್ಷಕರಾದ ಹೊನ್ನಗಂಗಾ ಭೋವಿ ರವರು ಕ್ವಿಜ್ ನೆಡಿಸಿಕೊಟ್ಟರು, ಶಿಕ್ಷಕರಾದ ಲಿಂಗೇಶ್ ರವರು ಕಾರ್ಯಕ್ರಮ ನಿರೂಪಿಸಿದರು.
ಕೆಂಪು ಮನೆ, ಹಸಿರು ಮನೆ, ಹಳದಿ ಮನೆ, ನೀಲಿ ಮನೆ ಎಂಬ ವಿದ್ಯಾರ್ಥಿಗಳ ತಂಡ ವು ಕ್ವಿಜ್ ನಲ್ಲಿ ಭಾಗವಹಿಸಿದ್ದವು. ಹಳದಿ ಮನೆಯ ತಂಡವು ಪ್ರಥಮ ಬಹುಮಾನ,ಮತ್ತು ಕೆಂಪು ಮನೆ ಯ ತಂಡವು ದ್ವಿತೀಯ ಬಹುಮಾನವನ್ನು ಪಡೆಯಿತು.
ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ, ಅಭಿನಂದಿಸಲಾಯಿತು.


Leave a Reply