Advertisement

ಜೆ ಡಿ ಎಸ್ ಪಕ್ಷದ ಕಾರ್ಯಕರ್ತರ ಸಭೆ ಬೂತ್‌ಮಟ್ಟದಲ್ಲಿ ಬಲವರ್ಧನೆಗೆ ಸಲಹೆ:  ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ

ಆಲೂರು :ತಾಲ್ಲೂಕು ಅಧ್ಯಕ್ಷ ಕೆ ಎಸ್ ಮಂಜೇಗೌಡರ ನಿವಾಸದಲ್ಲಿ ಆಯೋಜಿಸಿದ್ದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಹಾಗೂ ಸಚಿವ ಹೆಚ್ ಡಿ ರೇವಣ್ಣ ಮಾತನಾಡಿದರು ‘ಪ್ರತಿ ಬೂತ್ ಮಟ್ಟದಲ್ಲಿಯೂ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡಿ, ಪಕ್ಷದ ವಿಚಾರವನ್ನು ಎಲ್ಲರಿಗೂ ತಲುಪಿಸಬೇಕು
‘ತಾಲ್ಲೂಕಿನಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ಕಳೆದೆರಡೂವರೆ ವರ್ಷದಿಂದ ಸೂಕ್ಷ್ಮವಾಗಿ ಗಮನಿಸಿದ್ದೇನೆ. ನಮ್ಮ ಕ್ಷೇತ್ರದ ಜನರು ಇಟ್ಟಿದ್ದ ನಿರೀಕ್ಷೆ ಹುಸಿಯಾಗಿದೆ, ಅಧಿಕಾರ ಇಲ್ಲದೆ ಇದ್ದಾಗ ಹೋರಾಟ ಮಾಡುವುದು ಸುಲಭದ ಮಾತಲ್ಲ ಆದರೂ ನಮ್ಮ ಕಾರ್ಯಕರ್ತರ ಪರವಾಗಿ ಎಂದಿಗೂ ನಿಮ್ಮೊಂದಿಗೆ ನಾನಿದ್ದೇನೆ’ ಎಂದರು.
‘ಕಾರ್ಯಕರ್ತರು ಪ್ರತಿ ಹಂತದಲ್ಲಿಯೂ ಜೆಡಿಎಸ್ ಪಕ್ಷದ ಸಿದ್ಧಾಂತ ಹಾಗೂ ಜನರಿಗೆ ಕೊಟ್ಟಿರುವ ಕೊಡುಗೆಗಳ ಬಗ್ಗೆ  ಅವರಿಗೆ ಮನದಟ್ಟು ಮಾಡಬೇಕು ಮುಂಬರುವ ಚುನಾವಣೆಗಳಲ್ಲಿ ಪಕ್ಷ ಗೆಲುವು ಸಾಧಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು’ ಎಂದು ಸಲಹೆ ನೀಡಿದರು

ಮಾಜಿ ಶಾಸಕ ಹೆಚ್ ಕೆ ಕುಮಾರಸ್ವಾಮಿ ಮಾತನಾಡಿ ಹಾಸನ ಕ್ಷೇತ್ರದಲ್ಲಿ ಪಕ್ಷದ ಸುಧಾರಣೆ ಮತ್ತು ಬಲವರ್ಧನೆಗಾಗಿ ಈ ಕಾರ್ಯಕರ್ತರ ಸಭೆ ಆಯೋಜನೆ ಮಾಡಲಾಗಿದ್ದು 24 ರ ಸಭೆಯಲ್ಲಿ ಅನೇಕ ಜೆ ಡಿ ಎಸ್ ನಾಯಕರು ಭಾಗವಹಿಸಲಿದ್ದಾರೆ ಹಾಗೂ ರಾಜ್ಯ ನಾಯಕರ ಮಾರ್ಗದರ್ಶನದಲ್ಲಿ ಪಕ್ಷದ ಮುಂದಿನ ಗುರಿಗಳ ಬಗ್ಗೆ ಚರ್ಚೆ ಮಾಡುವುದರ ಜೊತೆಗೆ ಪಕ್ಷದ ಕಾರ್ಯಕರ್ತರ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶಕಲ್ಪಿಸಲಾಗಿದೆ ಜೊತೆಗೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಪೂರ್ವಸಿದ್ಧತೆಯ ಕುರಿತಾದ ಚರ್ಚೆ ಮಾಡಲಿದ್ದಾರೆ ಹಾಗೂ  ಇತ್ತೀಚಿಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿದ್ದು ಪಕ್ಷವು ಪ್ರತಿ 3 ವರ್ಷಕ್ಕೊಮ್ಮೆ ಎಲ್ಲಾ ಪದಾಧಿಕಾರಿಗಳನ್ನು ಪುನರ್ ಆಯ್ಕೆ ಮಾಡುವ ಪ್ರಕ್ರಿಯೆ ನೆಡೆಸುತ್ತದೆ ಹಾಗೂ ಪ್ರತಿ ಗ್ರಾಮದಲ್ಲಿ ಹತ್ತು ಜನ ಯುವಕರನ್ನು ಒಟ್ಟುಗೋಡಿಸಿ ಅವರಿಗೂ ಒಂದು ಸ್ಥಾನವನ್ನು ನೀಡಿ  ಜೆಡಿಎಸ್ ಕಾರ್ಯಕರ್ತರ ಸಲಹೆ ಸೂಚನೆಗಳನ್ನು ಪಡೆಯಲು ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಜನವರಿ 24ರಂದು ಕಾರ್ಯಕರ್ತರ ಸಭೆ ಆಯೋಜನೆ ಮಾಡಲಾಗಿದೆ ಹಾಗೂ  ಸ್ಥಳೀಯವಾಗಿ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಈ ಸಭೆ ಸಹಕಾರಿಯಾಗಲಿದೆ ಎಂದರು.ಈ ಕಾರ್ಯಕರ್ತರ ಸಭೆಯಲ್ಲಿ ಜೆ ಡಿ ಎಸ್ ಮಾಜಿ ಶಾಸಕ ಹೆಚ್ ಕೆ ಕುಮಾರಸ್ವಾಮಿ ತಾಲ್ಲೂಕು ಜೆ ಡಿ ಎಸ್ ಅಧ್ಯಕ್ಷ ಕೆ ಎಸ್ ಮಂಜೇಗೌಡ ಹಾಗೂ ಜೆ ಡಿ ಎಸ್ ಮುಖಂಡರುಗಳು ಹಾಗೂ ಕಾರ್ಯಕರ್ತರಿದ್ದರು.

Leave a Reply

Your email address will not be published. Required fields are marked *