
ಹಾಸನ: ನಗರದ ಹಾಸನಾಂಬ ಉದ್ಯಾನವನದಲ್ಲಿ ಜನವರಿ 26 ಮತ್ತು 27ರಂದು ತೋಟಗಾರಿಕೆ ಇಲಾಖೆ ವತಿಯಿಂದ ಆಲೂಗಡ್ಡೆ ಮೇಳ ಆಯೋಜಿಸಲಾಗಿದೆ ಎಂದು ಶಾಸಕ ಸ್ವರೂಪ ಪ್ರಕಾಶ್ ತಿಳಿಸಿದರು
ಹಾಸನದ ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಈ ಕುರಿತು ಪೂರ್ವಭಾವಿ ಸಭೆ ನಡೆಸಿ ಜೊತೆಗೆ ಪೋಸ್ಟರ್ ಬಿಡುಗಡೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕಾಲದಲ್ಲಿ ಶೇಕಡ 70ರಷ್ಟು ಭಾಗ ಆಲೂಗಡ್ಡೆ ಬೆಳೆ ಮಾಡುತ್ತಿದ್ದ ಹಾಸನ ಜಿಲ್ಲೆ ಇತ್ತೀಚೆಗೆ ಗಣನೀಯವಾಗಿ ಕ್ಷೀಣಿಸಿದೆ, ಆಲೂಗಡ್ಡೆ ಬೆಳೆಗೆ ಉತ್ತೇಜನ ನೀಡುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ಹಾಸನ ಜಿಲ್ಲೆ ಹೊರ ಜಿಲ್ಲೆ ಹೊರ ರಾಜ್ಯಗಳಿಂದಲೂ ಗ್ರಾಹಕರು ಹಾಗೂ ಬೆಳೆಗಾರರು ಆಗಮಿಸಿ ತಮ್ಮಲ್ಲಿನ ವಿವಿಧ ರೀತಿಯ ಬೆಳೆಗಳ ಪ್ರದರ್ಶನ ಮತ್ತು ಮಾರಾಟ ಮಾಡಲಿದ್ದಾರೆ ಇದರ ಜೊತೆಗೆ ಆಲೂಗಡ್ಡೆಗೆ ಉತ್ತೇಜನ ನೀಡಿ ಅದನ್ನು ಮತ್ತೆ ಹಾಸನ ಜಿಲ್ಲೆಯಲ್ಲಿ ಪುನರ್ ಸ್ಥಾಪಿಸಿ ಮತ್ತೆ ಬೆಳೆ ಬೆಳೆಯುವ ಸಲುವಾಗಿ ರೈತರಿಗೆ ಉತ್ತೇಜನ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು
ಬಹುತೇಕ ಆಲೂಗೆಡ್ಡೆ ಬೆಳೆ ಯುತ್ತಿದ್ದ ಹಾಸನ ಜಿಲ್ಲೆ ಅಂಗಮಾರಿ ಎಂಬ ಕಾಯಿಲೆಯಿಂದ ಆಲೂಗಡ್ಡೆ ರೋಗದತ್ತ ರೈತರು ಒಲವನ್ನು ಕಳೆದುಕೊಂಡರು. ಆದರೆ, ಆಲೂಗಡ್ಡೆ ಹಾಸನ ಜಿಲ್ಲೆಯ ಮಾತ್ರವಲ್ಲದೆ ವಿವಿಧ ಜಿಲ್ಲೆಗಳ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು ಆಹಾರ ಪದ್ಧತಿಗೂ ಪ್ರಮುಖವಾಗಿದೆ ಆದುದರಿಂದ ಆಲೂಗಡ್ಡೆ ಬೆಳೆಯನ್ನು ಉಳಿಸುವುದು ಎಲ್ಲರ ಕರ್ತವ್ಯ ಎಂದರು.
ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರಕ್ಕೆ ವಿದ್ಯಾವಂತ ಯುವ ಜನತೆ ಬರುತ್ತಿದ್ದು ಅವರಿಗೆ ಪೂರಕ ಶಕ್ತಿ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ ಬೆಳೆಗಳಿಗೆ ಬರುವ ಖಾಯಿಲೆಗಳಿಗೆ ಕಡುಬು ಹಾಕಿ, ಬೆಂಬಲ ಬೆಲೆ ಹಾಗೂ ಗುಣಮಟ್ಟದ ಬೆಳೆ ಒದಗಿಸುವ ಮೂಲಕ ರೈತರಿಗೆ ಸರ್ಕಾರ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.
ಇತ್ತೀಚೆಗೆ ಮೆಕ್ಕೆಜೋಳಕ್ಕು ಬಿಳಿ ಸುಳಿ ರೋಗವೆಂಬ ರೋಗ ಬಾದೆ ಕಾಡುತ್ತಿದ್ದು ಇದರಿಂದ ರೈತರ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ ಅವರಿಗೂ ಕೂಡ ಸರ್ಕಾರ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಚಿಂತಿಸಿ ಅವರಿಗೆ ಪರಿಹಾರ ಹಾಗೂ ಬೆಂಬಲ ಬೆಲೆ ಒದಗಿಸಿ ರೈತರನ್ನು ಮೇಲೆತ್ತುವ ಕೆಲಸ ಮಾಡಬೇಕು ಎಂದರು.


Leave a Reply