Advertisement

ಇಡಿ ವಿಶ್ವ ಕೆ ತನ್ನ ಕಲೆಯ ಮೂಲಕ ನಮ್ಮ ಸಂಸ್ಕೃತಿಯನ್ನು ಪ್ರಚಲಿಸಿದ ವಿಶ್ವಕರ್ಮರು ನಮ್ಮ ಆದಿಪುರುಷರು. ತಹಸಿಲ್ದಾರ್ ಶ್ರೀಧರ್ ಕಂಕನವಾಡಿ

ಬೇಲೂರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ವಿಶ್ವಕರ್ಮ ಜಯಂತಿಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ
ನಂತರ ಮಾತನಾಡಿದ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ. ಅವರು, ವಿಶ್ವಕರ್ಮರು ಶ್ರಮ, ಸೃಜನಶೀಲತೆ ಹಾಗೂ ನೈಪುಣ್ಯದ ಜೀವಂತ ಪ್ರತೀಕವಾಗಿದ್ದಾರೆ . ಸಮಾಜದ ಅಭಿವೃದ್ಧಿಯಲ್ಲಿ ಕಾರ್ಮಿಕರು, ಶಿಲ್ಪಿಗಳು ಹಾಗೂ ಕೈಗಾರಿಕಾರರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ವಿಶ್ವಕರ್ಮರ ಕೊಡುಗೆ ಎಂದಿಗೂ ಮರೆತಿರಲು ಸಾಧ್ಯವಿಲ್ಲ ಎಂದು ತಿಳಿಸಿದರು. ಇಂದಿನ ಯುವಜನತೆ ವಿಶ್ವಕರ್ಮರ ಆದರ್ಶಗಳು, ಶ್ರಮ ಸಂಸ್ಕೃತಿ ಹಾಗೂ ಆತ್ಮಗೌರವವನ್ನು ಅಳವಡಿಸಿಕೊಂಡು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು..
ಇದರ ಜೊತೆಯಲ್ಲಿ ತಮ್ಮ ಕುಲ ಕಸುಬುಗಳನ್ನ ಎಂದಿಗೂ ಸಹ ಯುವ ಜನಾಂಗ ಮರೆಯಬಾರದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾಯಕವಾಗಿ ಮಾತನಾಡಿದ ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಪುರುಷೋತ್ತಮ ಅವರು, ವಿಶ್ವಕರ್ಮ ಸಮಾಜವು ಶತಮಾನಗಳಿಂದ ದೇಶದ ಆರ್ಥಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿಕೊಂಡಿದೆ ದೇವಾಲಯಗಳ ಶಿಲ್ಪಕಲೆ, ವಾಸ್ತುಶಿಲ್ಪ, ಲೋಹ, ಮರ, ಕಲ್ಲು ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ವಿಶ್ವಕರ್ಮರ ಕೊಡುಗೆ ಅಪ್ರತಿಮವಾಗಿದೆ .
. ಇಂತಹ ಶ್ರೀಮಂತ ಪರಂಪರೆಯನ್ನು ಇಂದಿನ ಪೀಳಿಗೆಯ ಯುವಕರು ಅರಿತುಕೊಂಡು ಮುಂದುವರಿಸಬೇಕಾಗಿದೆ .
ಸರ್ಕಾರದಿಂದ ವಿಶ್ವಕರ್ಮ ಸಮಾಜಕ್ಕೆ ದೊರೆಯುತ್ತಿರುವ ವಿವಿಧ ಸೌಲಭ್ಯಗಳು, ಯೋಜನೆಗಳು ಹಾಗೂ ಶೈಕ್ಷಣಿಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಯುವಕರು ಶಿಕ್ಷಣ, ಸ್ವಉದ್ಯೋಗ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಮುಂದೆ ಬರಬೇಕು . ಸಮಾಜದ ಒಗ್ಗಟ್ಟಿನಿಂದ ಮಾತ್ರ ಪ್ರಗತಿ ಸಾಧ್ಯವಾಗುತ್ತದೆ ಎಂದು ಹೇಳಿದರು., ಕಳೆದ ಆರು ವರ್ಷಗಳಿಂದ ಸರ್ಕಾರದ ವತಿಯಿಂದ ವಿಶ್ವಕರ್ಮ ಜಯಂತಿಯನ್ನು ಅಧಿಕೃತವಾಗಿ ಆಚರಿಸಲಾಗುತ್ತಿದೆ . ಅಮರ ಶಿಲ್ಪಿ ಜಕಣಾಚಾರಿ ಬೇಲೂರಿಗೆ ಆಗಮಿಸಿದ ಹಿನ್ನೆಲೆ ಈ ಪ್ರದೇಶವು ‘ವೇಲಾಪುರಿ’ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ ಎಂದು ಸ್ಮರಿಸಿದರು. ಬೇಲೂರಿನ ಐತಿಹಾಸಿಕ ಚನ್ನಕೇಶವ ಸ್ವಾಮಿ ದೇವಾಲಯದ ಭವ್ಯ ಶಿಲ್ಪಕಲೆ ಹಾಗೂ ದೇವರ ಮೂರ್ತಿ ನಿರ್ಮಾಣಕ್ಕೆ ಜಕಣಾಚಾರಿಯವರೇ ಕಾರಣರಾಗಿದ್ದು, ಅವರ ಶಿಲ್ಪಕೌಶಲ್ಯ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಲ್ಲಾದರೂ ಸಹ ಒಂದು ವೃತ್ತಕ್ಕೆ ವಿಶ್ವಕರ್ಮ ಆದಿಪುರುಷ ಅಮರಶಿಲ್ಪಿ ಜಕಣಾಚಾರ್ಯ ಅವರ ಹೆಸರು ಇಡುವಂತೆ ಮನವಿ ಮಾಡಿದರ ..
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ,ಬಿಆರ್ ಸಿ ಪ್ರಾಂಶುಪಾಲರಾದ ಹರೀಶ್ ,ಸಮಾಜದ ಉಮೇಶ್ ಆಚಾರ್ ನಾಗೇಶ್ ಆಚಾರ್ ಹಿತೇಶ್ ಟೀನು,ಅರುಣಾಚಲಂ,ವಿಶ್ವನಾಥ್
ಇಲಾಖೆಗಳ ಅಧಿಕಾರಿಗಳು, ವಿಶ್ವಕರ್ಮ ಸಮಾಜದ ಮುಖಂಡರು, ಸಮಾಜದ ಹಿರಿಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *