



ಈ ಬಗ್ಗೆ ತಾಲ್ಲೂಕು ತಹಸೀಲ್ದಾರ್ ಮಲ್ಲಿಕಾರ್ಜುನ್ ರವರು ಪ್ರತಿಕ್ರಿಯೆ ನೀಡಿ ಬೆಳಗ್ಗಿನ ಜಾವ 3. 04 ಗಂಟೆಗೆ ತಮಿಳುನಾಡಿನ ಚೆನೈ ನಿಂದ ನಮ್ಮ ತಾಲ್ಲೂಕು ಕಚೇರಿಯ ಇ ಮೇಲ್ ಗೆ ಒಂದು ಸಂದೇಶ ಬಂದಿದ್ದು, ಬೆಳಗ್ಗೆ ಸಿಬ್ಬಂದಿ ಓರ್ವ ಮೇಲ್ ನೋಡಿ ನನಗೆ ತಿಳಿಸಿದ್ದು, ತಕ್ಷಣ ನಾನು ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಹಾಗೂ ಪೊಲೀಸ್ ರವರ ಗಮನಕ್ಕೆ ತಂದಿದ್ದು, ಸ್ಥಳಕ್ಕೆ ಬಾಂಬ್ ನಿಸ್ಕ್ರೀಯ ದಳ ಹಾಗೂ ಶ್ವಾನ ದಳದ ಸಿಬ್ಬಂದಿಯಿಂದ ತಾಲ್ಲೂಕು ಕಚೇರಿಯ ಎಲ್ಲಾ ಕಟ್ಟಡಗಳನ್ನು ಪರಿಶೀಲನೆ ನಡೆಸಿ ಕಾರ್ಯಚರಣೆ ನಡೆಸಿದ್ದೇವೆ ಅಂತಹ ಯಾವುದೇ ಬಾಂಬ್ ನಂತ ವಸ್ತುಗಳು ಕಂಡುಬಂದಿಲ್ಲ . ಇದು ಸುಳ್ಳು ಸಂದೇಶ ವಾಗಿದ್ದು ಸಿಬ್ಬಂದಿಗಳು ಕೆಲಸ ಮಾಡುವಂತೆ ತಿಳಿಸಲಾಗಿದೆ.
ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ಆಲೂರು (alooru) ಎಂಬ ತಾಲ್ಲೂಕು ಇದೆ, ಆದರೆ ಮೇಲ್ ವಿಳಾಸ ಆಲೂರು ತಹಶೀಲ್ದಾರ್ ರವರ ಅಧಿಕೃತ ವಿಳಾಸಕ್ಕೆ ಬಂದಿದ್ದು, ಮುನ್ನೇಚರಿಕೆಯಿಂದ ನಮ್ಮ ಸಿಬ್ಬಂದಿಗಳು ಹಾಗೂ ಸಾರ್ವಜನಿಕರ ಹಿತಶಕ್ತಿಯಿಂದ ತಪಾಸಣೆ ನಡೆಸಲಾಗಿದೆ ಎಂದರು.


Leave a Reply