
ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಬೆಟ್ಟಳ್ಳಿ ಗ್ರಾಮದ ರವಿರವರು ದಿ : 09/12/2025 ರಂದು ಬೆಳಗ್ಗೆ
10.00 ಗಂಟೆಯಲ್ಲಿ, ಹಾಸನದ ಮಣಪ್ಪುರಂ ಫೈನಾನ್ಸ್ ಗೆ ಸಾಲದ ಕಂತನ್ನು ಕಟ್ಟಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ರಾತ್ರಿಯಾದರೂ ಬರದೇ ಇದ್ದು ಎಲ್ಲೋ ಕೆಲಸಕ್ಕೆ ಹೋಗಿರಬಹುದೆಂದು ಮನೆಯವರು ತಿಳಿದಿದ್ದರೂ ಆದರೆ ಇದುವರೆವಿಗೂ ಬರದೇ ಇದ್ದುದರಿಂದ ಸಂಬಂಧಿಕರ ಮನೆಗಳಿಗೆ ಫೋನ್ ಕರೆ ಮಾಡಿದಾಗ ಯಾರೂ ಕೂಡ ಬಂದಿಲ್ಲವೆಂದು ತಿಳಿಸಿರುತ್ತಾರೆ ಹಾಗೂ ಹಾಸನದ ಮಣಪ್ಪುರಂ ಫೈನಾನ್ಸ್ ಗೆ ಫೋನ್ ಮಾಡಿದಾಗ ರವಿರವರು ಹಣ ಕಟ್ಟಿ, ಹೋಗಿರುವುದಾಗಿ ಬ್ಯಾಂಕಿನವರು ತಿಳಿಸಿದ್ದು, ಇದುವರೆವಿಗೂ ರವಿರವರನ್ನು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದೇ ಇದ್ದುದರಿಂದ ಪತ್ನಿ ಸುಮಿತ್ರಾ ರವರು ಆಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಕಾಣೆಯಾಗಿರುವ ರವಿರವರನ್ನು ಪತ್ತೆ ಮಾಡಿಕೊಡಬೇಕೆಂದು ಕಣ್ಣೀರಿಡುತ್ತಿದ್ದಾರೆ ರವಿ ಪತ್ನಿ ಸುಮಿತ್ರಾ ನೀಡಿದ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವ್ಯಕ್ತಿಯನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ ಯಾರಿಗಾದರೂ ಈ ವ್ಯಕ್ತಿಯ ಸುಳಿವು ಸಿಕ್ಕರೆ ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಎಂದು ಠಾಣೆಯ ಪ್ರಕಟಣೆಯಾಗಿರುತ್ತದೆ
ದೂರವಾಣಿ ಸಂಖ್ಯೆ :9353135763.
,8147528030


Leave a Reply