
ಬೇಲೂರು: ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನವರ ದತ್ತುಪುತ್ರ ಉಮೇಶ್ ಅವರ ಮನೆಯಲ್ಲಿ ತನ್ಬ ಕೊನೆಯ ದಿನಗಳನ್ನು ಕಳೆದ ಹಿನ್ನೆಲೆಯಲ್ಲಿ ಅವರ ಅಂತಿಮ ದರ್ಶನಕ್ಕಾಗಿ ತಾಲೂಕು ಆಡಳಿತ ಸಾರ್ವಜನಿಕ ದರ್ಶನಕ್ಕಾಗಿ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಈ ಬಗ್ಗೆ ಮಾತನಾಡಿದ ತಹಶಿಲ್ದಾರ್ ಶ್ರೀಧರ್ ಕಂಕನವಾಡಿ ವೃಕ್ಷಮಾತೆ ಸುಮಾರು ೨೦ ವರ್ಷಗಳಿಂದ ಬೇಲೂರಿನಲ್ಲಿ ನೆಲಸಿದ ಹಿನ್ನೆಲೆಯಲ್ಲಿ ತಾಲೂಕಿನ ಜನತೆ ಅವರ ಅಂತಿಮ ದರ್ಶನಕ್ಕಾಗಿ ಕಾಯುತ್ತಿದ್ದು ಜೂನಿಯರ್ ಕಾಲೇಜ್ ಮೈದಾನದಲ್ಲಿ ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಂಡಿದೆ.ಪೊಲೀಸ್ ಇಲಾಖೆ ವತಿಯಿಂದ ಯಾವುದೇ ರೀತಿಯ ನೂಕು ನುಗ್ಗಲಾಗದಂತೆ ಪುರಸಭೆ ಹಾಗು ಪೊಲೀಸ್ ಇಲಾಖೆ ಬ್ಯಾರಿ ಕೇಟ್ ಅಳವಡಿಸುತ್ತಿದ್ದು ಸುಮಾರು ೩ ರಿಂದ ೪ ಸಾವಿರ ಜನರು ಅವರ ಅಂತಿಮ ದರ್ಶನ ಪಡೆಯುವ ನಿರೀಕ್ಷೆ ಇದ್ದು ಯಾವುದೇ ರೀತಿ ಲೋಪದೋಷವಾಗದಂತೆ ಸುಗಮ ಸಂಚಾರದ ವ್ಯವಸ್ಥೆ ಪಾರ್ಕಿಂಗ್ ವ್ಯವಸ್ಥೆ ಹಾಗು ಅವರ ಅಂತಿಮ ದರ್ಶನ ಮುಗಿಯುವರೆಗು ಎಲ್ಲಾ ರೀತಿಯ ಸಕಲ ಸಿದ್ದತೆಗಳನ್ನು ಸರ್ಕಾರದ ವತಿಯಿಂದ ಮಾಡಲಾಗುತ್ತಿದೆ.ಸಾರ್ವಜನಿಕರು ಶಾಂತಿಯಿಂದ ಅಂತಿಮ ದರ್ಶನ ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕರಾದ ರೇವಣ್ಣ ,ಜಗದೀಶ್ ಮುಖ್ಯಾಧಿಕಾರಿ ಬಸವರಾಜ್ ಶಿಗ್ಗಾವಿ ಆರೋಗ್ಯಾಧಿಕಾರಿ ಲೋಹಿತ್ ಇದ್ದರು.


Leave a Reply