
ಸಕಲೇಶಪುರ: ಪಟ್ಟಣದ APMC ಬಳಿ ಅಸ್ಸಾಂ ಮೂಲದ ಕಾರ್ಮಿಕರಾದ ಅಮ್ಜದ್ ಅಲಿ ಮತ್ತು ಇದ್ರೀಸ್ ಅಲಿ ( ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಹೋಬಳಿಯ ಬೆಟ್ಟದಮನೆಯ ಎಸ್ಟೇಟ್ ಒಂದರಲ್ಲಿ ಕೆಲಸ) ಇವರುಗಳು ಸುಮಾರು 500 ಗ್ರಾಂ(ಅರ್ಧ ಕೆ.ಜಿ) ಗಾಂಜಾ ಸೊಪ್ಪನ್ನು ಮಾರಾಟಮಾಡುತ್ತಿದ್ದ ವೇಳೆ ಇವರುಗಳನ್ನು ದಸ್ತಗಿರಿಮಾಡಿ ಠಾಣೆಗೆ ಕರೆದುಕೊಂಡು ಪ್ರಕರಣ ದಾಖಲಿಸಿ,ನಂತರ ನ್ಯಾಯಾಲಯಕ್ಕೆ ಹಾಜರಿಪಡಿಸಿದ್ಧಾರೆ. ಈ ದಾಳಿಯಲ್ಲಿ ಸಕಲೇಶಪುರ ಡಿವೈಎಸ್ಪಿ ಮಾಲತೇಶ್ ಎಸ್.ಕೆ., ಪೊಲೀಸ್ ಇನ್ಸ್ ಪೆಕ್ಟರ್ ವಿ.ಸಿ.ವನರಾಜು,ಸಬ್ ಇನ್ಸ್ ಪೆಕ್ಟರ್ ಮಹೇಶ್ ಜೆ.ಈ,ಹಾಗೂ ಸಿಬ್ಬಂದಿಗಳಾದ ಪೃಥ್ವಿ,ರೇವಣ್ಣ,ಶ್ರೀಧರ್,ಸೋಮಶೇಖರ್, ಚಂದ್ರಕಾಂತ್,ಮಧು ಇದ್ದರು.


Leave a Reply