
ಆಲೂರು: ವೈದ್ಯರ ನಿರ್ಲಕ್ಷ್ಯ ದಿಂದತಾಲ್ಲೂಕಿನ ನಾವಿದ್ ಷರೀಪ್ (48) ಎಂಬ ವ್ಯಕ್ತಿ ತಡರಾತ್ರಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಆಲೂರು ಪಟ್ಟಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.ನಾವಿದ್ ಅವರು ಎದೆನೋವು ಅನುಭವಿಸಿ ಗುರುವಾರ ತಡರಾತ್ರಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸಿದ್ದರು. ಆದರೆ ವೈದ್ಯರ ನಿರ್ಲಕ್ಷದಿಂದ ಚಿಕಿತ್ಸೆ ದೊರೆಯದೆ, ಕೆಲವೇ ಕ್ಷಣಗಳಲ್ಲಿ ಅವರು ಅಸುನೀಗಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.ಈ ಘಟನೆಯ ನಂತರ ಆಸ್ಪತ್ರೆಯ ಮುಂಭಾಗಕ್ಕೆ ನೂರಾರು ಮುಸ್ಲಿಂ ಭಾಂದವರು ಮತ್ತು ಸಾರ್ವಜನಿಕರು ಸೇರಿ “ಎದೆನೋವಿನಿಂದ ಬಂದವರು ಸ್ಮಶಾನ ಸೇರಿದ್ದು ಏಕೆ?”, “ಸಾವಿಗೆ ವೈದ್ಯರೇ ಕಾರಣ!” ಎಂದು ಘೋಷಣೆ ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು.ಸಾರ್ವಜನಿಕರು ಆಸ್ಪತ್ರೆಯ ವೈದ್ಯಾಧಿಕಾರಿಗಳ ವಿರುದ್ಧ ಕಿಡಿಕಾರುತ್ತಾ,“ಸಮಯಕ್ಕೆ ಚಿಕಿತ್ಸೆ ನೀಡಿದ್ದರೆ ನಾವಿದ್ ಪ್ರಾಣ ಉಳಿಯುತ್ತಿತ್ತು. ವೈದ್ಯರ ನಿರ್ಲಕ್ಷವೇ ಸಾವಿಗೆ ಕಾರಣ,” ಎಂದು ಆರೋಪಿಸಿದರು.ಘಟನೆಯ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಆಸ್ಪತ್ರೆಯ ಆಡಳಿತದಿಂದ ವರದಿ ಪಡೆಯಲಾಗಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.ಸ್ಥಳೀಯರು ಸರ್ಕಾರದಿಂದ ತನಿಖೆ ನಡೆಸಿ, ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.


Leave a Reply