
ಬೆಂಗಳೂರಿನಲ್ಲಿ ಭಾನುವಾರ ಕೇಂದ್ರ ಸಚಿವರು ಹಾಸನಾಂಬೆ ದರ್ಶನ ವೇಳೆ ಜಿಲ್ಲಾಡಳಿತದಿನ ಶಿಷ್ಟಾಚಾರ ಪಾಲನೆ ಮಾಡದೆ ನಿಮಗೆ ಅಪಮಾನ ಮಾಡಲಾಗಿದೆ ಎಂಬ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ” ನಾನು ಶಿಷ್ಟಾಚಾರಕ್ಕೆ ಆದ್ಯತೆ ಕೊಡಲ್ಲ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅಧಿಕಾರಿಗಳಿಗೇಕೆ ತೊಂದರೆ ಕೊಡಬೇಕು? ದೇವಿಯ ದರ್ಶನ ಮುಖ್ಯ, ನನಗೆ ದರ್ಶನ ಆಗಿದೆ. ಸಾರ್ವಜನಿಕರು ಕೂಡ ಯಾವುದೇ ತೊಂದರೆಗೆ ಒಳಗಾಗದೆ ನೆಮ್ಮದಿಯಾಗಿ ತಾಯಿಯ ದರ್ಶನ ಮಾಡುತ್ತಿದ್ದಾರೆ. ಉತ್ತಮವಾಗಿ ವ್ಯವಸ್ಥೆ ಮಾಡಲಾಗಿದೆ. ಅದು ಮುಖ್ಯವೇ ಹೊರತು ಶಿಷ್ಟಾಚಾರವಲ್ಲ ” ಎಂದರು.ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾಗ ಅಧಿಕಾರಿಗಳು ಹೊರಗೆ ಮಲಗುತ್ತಿದ್ದರು. ನನ್ನಿಂದ ಅವರಿಗೆ ತೊಂದರೆ ಆಗಿದೆ. ಹೀಗಾಗಿ ನಾನು ಶಿಷ್ಟಾಚಾರದ ಬಗ್ಗೆ ತಲೆಕೆಡಿಸಿಕೊಳ್ಳಲಾರೆ ಎಂದು ಅವರು ಹೇಳಿದರು.


Leave a Reply